ಭಾನುವಾರ, 27 ನವಂಬರ 2022
ತರಳಬಾಳು ಕೇಂದ್ರ, ಅರ್. ಟಿ. ನಗರ, ಬೆಂಗಳೂರು.
ಯಕ್ಷಗಾನ ಪ್ರಿಯರಿಗೆ ಅದೊಂದು ರಸದೌತಣ. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ರಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಮಲಶಿಲೆ, ಇವರಿಂದ, ಸುವರ್ಣ ಪ್ರಸಾಧನ ಯಕ್ಷರಂಗ ಇವರ ಸಹಯೋಗದಲ್ಲಿ
"ಬ್ರಹ್ಮ ಕಪಾಲ" ಎಂಬ ಪೌರಾಣಿಕ ಪ್ರಸಂಗವನ್ನು ಅದ್ಭುತವಾಗಿ ಆಡಿ ತೋರಿಸಿದರು.
ದೈವೆಂದ್ರನ ಅಸ್ತಾನ |
ಸುಮಾರು ಸಂಜೆ 4 ಗಂಟೆಗೆ ಪ್ರಾರಂಭವಾದ ಆಟ ಸತತವಾಗಿ ನಡೆದು 9 ಗಂಟೆಗೆ ಮುಗಿಯಿತು.
ಮಧ್ಯದಲ್ಲಿ ಸಭಾ ಕಾರ್ಯಕ್ರಮ ಇದ್ದು ಮಾಜಿ ಮಂತ್ರಿ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಇತರ ಪ್ರಾಯೋಜಕರುಗಳು ಇದ್ದು ಅವರಿಗೆ ಸನ್ಮಾನ ವನ್ನು ಮಾಡಲಾಯಿತು.
ಪ್ರಸಂಗದ ಸಂಕ್ಷಿಪ್ತ ಕಥೆ ಹೀಗಿದೆ.
ಇಂದ್ರನ ಆಸ್ಥಾನದಲ್ಲಿ ಪರಮೇಶ್ವರನನ್ನು ಆಹ್ವಾನಿಸಬೇಕೆಂದು ತೀರ್ಮಾನಿಸಿ, ಅವನು ಈಗ ಕಾರ್ತೀಕ ಮಾಸ ಆದರಿಂದ ಬರಲಾಗ ದೆಂದೂ, ಮುಂದಿನ ತಿಂಗಳು ಮಾಘ ಮಾಸದಲ್ಲಿ ಬರುವನೆಂದು ತಿಳಿಸಿದನು.
ಈ ಮಧ್ಯೆ ಚತುರ್ಮುಖ ಬ್ರಹ್ಮನು ತನ್ನ ಆಸ್ಥಾನದಲ್ಲಿ ಯಕ್ಷ ಮದನನ ಫೋಟೋಗೆ ಕಾಲಲ್ಲಿ ತುಳಿದು ಅವಮಾನಿಸಿ ದ್ದರಿಂದ ಸ್ವಂತ ಮಗಳು ಶಾರದೆ ಯೊಡನೆ ಮಾತನಾಡುತ್ತಿರುವಾಗ ಕಾಮದೇವ ಮದನನು ನೋಡಿ ತನ್ನ ಬಾಣಗಳಿಂದ ಅವರಿಗೆ ಪ್ರೇಮಾಂಕುರ ವಾಗುವಂತೆ ಮಾಡಿದನು.
ಮದನ ಪಾತ್ರ ಧಾರಿಯು ಅದ್ಭುತವಾದ ಅಬಿನಯ, ನ್ರತ್ಯ ಮಾಡಿ ಸಭಿಕರಿಂದ ಮೆಚ್ಚುಗೆ ಪಡೆದನು.
ಬ್ರಹ್ನನು ತನ್ನ ಮಗಳನ್ನು ಮದುವೆಯಾದಾಗ ಪರಶಿವನು ಅವನೊಡನೆ ಕಾದಾಡಿ , ಪರಸ್ಪರ ಹೀಯಾಳಿಸಿ, ಅವನ ಐದನೇ ತಲೆ (ಕಪಾಲ) ತುಂಡರಿಸಿದಾಗ ಬ್ರಹ್ಮನಿಂದ (ಬ್ರಹ್ಮ ಹತ್ಯಾ ದೋಷ) ಶಾಪ ಗ್ರಸ್ತ ನಾಗುವನು.
ಪರಶಿವನು ಒಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು, ಇನ್ನೊಂದು ಕೈಯಲ್ಲಿ ಬ್ರಹ್ಮ ಕಪಾಲವನ್ನು ಹಿಡಿದುಕೊಂಡು ಹಲವಾರು ಕಡೆ ತೆರಳುವನು.
"ಪತಿವ್ರತೆ" - ಕುಮುದಿನಿ |
ಯಕ್ಷಗಾನವು ಕರಾವಳಿಯ ಜನಪ್ರಿಯ ಕಲೆ. ವೇಷಭೂಷಣ, ನ್ರತ್ಯ, ಅಭಿನಯ, ಸಂಭಾಷಣೆ, ಹಾಗೂ ಕೊನೆಯಲ್ಲಿ ಕಥೆಯ ನೀತಿ ಪಾಠ ವನ್ನು ತಿಳಿಸುತ್ತಾರೆ.
ಬರೆದಿರುವುದು 29/11/2022
No comments:
Post a Comment