ಭಾನುವಾರ , 20 ನವಂಬರ 2022
ಗ್ರಂಥಾಲಯ, ತರಳಬಾಳು ಕೇಂದ್ರ, ಅರ್.ಟಿ. ನಗರ, ಬೆಂಗಳೂರು
ಶಿವರಾಮ ಕಾರಂತ ವೇದಿಕೆಯ 2022ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
"ಬಂದಿದೆ ಕನ್ನಡ ರಾಜ್ಯೋತ್ಸವ" - ಪ್ರಾರ್ಥನೆ
ಎಸ್. ಷಡಕ್ಷರಿ |
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು ನೆರೆದ ಸಭಿಕರನ್ನು ಆಹ್ವಾನಿಸಿ, ಮುಖ್ಯ ಅತಿಥಿ ಶ್ರೀ ಎಸ್. ಷಡಕ್ಷರಿ ಅವರನ್ನು ವೇದಿಕೆಗೆ ಬರಮಾಡಿಕೊಂಡರು .
ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಮುಖ್ಯ ಅತಿಥಿಯನ್ನು ಪರಿಚಯ ಮಾಡಿ ಕನ್ನಡ ರಾಜ್ಯೋತ್ಸವದ ಬಗ್ಗೆ ಕೆಲ ಕಾಲ ಮಾತನಾಡಿದರು.
ದೀಪಾ ಫಡ್ಕೆ |
"ಹಚ್ಚೇವು ಕನ್ನಡ ದೀಪ" - ಹಾಡನ್ನು ನಳಿನಿ ಸೋಮಯಾಜಿ, ರಾಧಮಣಿ ಮತ್ತು ಸುಜಾತ ರಾಮಸ್ವಾಮಿ ಅವರು ಮಧುರವಾಗಿ ಹಾಡಿದರು.
ವೇದಿಕೆಯ ಅಧ್ಹ್ಯಕ್ಷೆ ಶ್ರೀಮತಿ ದೀಪಾ ಫಡ್ಕೆ ಒಂದೆರಡು ಮಾತುಗಳನ್ನು ಆಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಮುಖ್ಯ ಅತಿಥಿಗಳಿಗೆ ಶಾಲು, ಹಾರ ಮತ್ತು ಪುಸ್ತಕ ಉಡುಗೊರೆಯಾಗಿ ಕೊಟ್ಟು ಸಮ್ಮಾನಿಸಲಾಯಿತು.
ಈ ಕೆಳಗಿನ ಫೇಸ್ ಬುಕ್ ಲೈವ್ ನಿಂದ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು.
ಶ್ರಮ ವಹಿಸಿದ ಶ್ರೀ ಸುಧೀಂದ್ರ ಅವರಿಗೆ ಧನ್ಯವಾದಗಳು.
https://m.facebook.com/story.php?story_fbid=3315849428631180&id=100085636043383&mibextid=Nif5oz
ಕಾರ್ಯಕ್ರಮದ ನಿರೂಪಣೆಯನ್ನು ಶಶಿಕಲಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಬರೆದಿರುವುದು 21/11/2022
No comments:
Post a Comment