Tuesday, November 1, 2022

MYSORE GOVIND PRASAD

 Tuesday, 1st November 2022

ಮೈಸೂರು ಗೋವಿಂದ ಪ್ರಸಾದ್
Happy birthday Mysore Govinda Prasad Sir

ಇಂದು ಹಿರಿಯರಾದ ಮೈಸೂರು ಗೋವಿಂದ ಪ್ರಸಾದ್ ಅವರ 85ನೇ ಜನ್ಮದಿನ.


ಶ್ರೀ ತಿರು ಶ್ರೀಧರ್ ಅವರ ಲೇಖನ :

ಅಕ್ಟೋಬರ್ 31 ಗೋವಿಂದ ಪ್ರಸಾದರ ಜನ್ಮದಿನ. ಇವರು ವಿಶ್ವಪ್ರಸಿದ್ಧ ತತ್ವಶಾಸ್ತ್ರಜ್ಞರೂ ಮತ್ತು ವಿದ್ವಾಂಸ ಲೇಖಕರೂ ಆದ ಪ್ರೊ. ಎಂ. ಯಾಮುನಾಚಾರ್ಯರ ಸುಪುತ್ರರು. ಗೋವಿಂದ ಪ್ರಸಾದರ ವಿದ್ಯಾಭ್ಯಾಸ ಮೈಸೂರಿನ ಶಾರದಾ ವಿಲಾಸ ಶಾಲೆ ಮತ್ತು ಯುವರಾಜಾ ಕಾಲೇಜುಗಳಲ್ಲಿ ನಡೆಯಿತು.

ಗೋವಿಂದ ಪ್ರಸಾದರು ಗ್ವಾಲಿಯರ್, ಊಟಿ, ದುಬೈ ಮುಂತಾದೆಡೆ ಗಣಿತ ಅಧ್ಯಾಪಕರಾಗಿ ಬೋಧಿಸಿದರು. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಕ್ರೀಡೆ ಹೀಗೆ ಅವರ ಆಸಕ್ತಿಗಳು ವೈವಿಧ್ಯಪೂರ್ಣ. ಅಂತೆಯೇ ಅವರು ಅಕ್ಕರೆಯಿಂದ ನಮ್ಮಂತವರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ರೀತಿಯೂ ಅರ್ಥಪೂರ್ಣ.

ಹಿರಿಯರೂ, ಜ್ಞಾನಿಗಳೂ, ಆಪ್ತರೂ ಆದ ಗೋವಿಂದ ಪ್ರಸಾದರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ನಿಮ್ಮ ಆಶೀರ್ವಾದ ಭಾಗ್ಯ ಸದಾ ನಮಗಿರಲಿ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ) 

ಶ್ರೀ ಸುಧಾಕರ್ ರಾವ್ ಪೇಜಾವರ್ ಅವರ ಸಂದೇಶ:
ಹರೆಯದಲ್ಲಿ ೮೫ - ಆದರೂ ಹುರುಪಿನಲ್ಲಿ  ಸದಾ ೨೨ ರ ಯವ್ವನ
ಪ್ರಾಯಕ್ಕೆ ಮುಪ್ಪು - ಆದರೂ  ಚಿಂತನೆಯಲ್ಲಿ ಸದಾ ಹೊಸತನ
ಕೆಲಸದಿಂದ  ನಿವೃತ್ತಿ - ಆದರೂ ಸದಾ ಅನ್ವೇಷಣೆಯ ಪ್ರವೃತ್ತಿ
ಜೀವನದಲ್ಲಿ ಏಕಾಂಗಿ - ಆದರೂ ಬದುಕಿನಲ್ಲಿ ಸದಾ ಸಂತೃಪ್ತಿ 
ತಮ್ಮಿಂದ ಕಲಿಯಬೇಕಾದದ್ದು ಬಹಳಷ್ಟ್ಟಿದೆ . ಅಲ್ಲಿಯ ತನಕ ಚಿರಂಜೀವಿಯಾಗಿರಿ .
ಜಯರಾಮ ಸೋಮಯಾಜಿ:

ನಮ್ಮ ಮತ್ತು ಮೈಸೂರು ಗೋವಿಂದ್ ಪ್ರಸಾದರ ನಂಟು, ಗೆಳೆತನ  1979 ನಿಂದ, ನೈಜೆರಿಯಾದ ಗೊಂಬೆ ಪಟ್ಟಣದಿಂದ ಪ್ರಾರಂಭವಾಗಿತ್ತು. ಅವರು ತಮ್ಮ ಪರಿವಾರ (ಹೆಂಡತಿ ನಾಗಮಣಿ, ಮಗ ತ್ರಿವಿಕ್ರಮ (ಬಚ್ಚು) ) ದೊಂದಿಗೆ ಗೊಂಬೆಯ ಟೀಚರ್'ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಬಂದಿದ್ದರು.
ನಾನು ಅಲ್ಲಿಂದ ಒಂದು ವರ್ಷ ಬಿಟ್ಟು ಪುನಃ ನೈಜೆರಿಯಾದ ಯೋಲ (ಗೊಂಬೆ ಯಿಂದ 250 ಕಿ.ಮೀ.ದೂರ) ನಗರಕ್ಕೆ ಬಂದು ಕೆಲಸಕ್ಕೆ ಸೇರಿದಾಗ ನಮ್ಮ ಗೆಳೆತನ ಮುಂದುವರಿಯಿತು.
ಮೊಬೈಲ್, ಇಂಟರ್ ನೆಟ್ ಇಲ್ಲದ ಕಾಲವಾಗಿತ್ತು. ವಾರಾಂತ್ಯಕ್ಕೆ ಭೇಟಿಯಾಗಲು ನಾವೀರ್ವರೂ ಹೊರಟಿದ್ದು,(250 ಕಿ.ಮೀ. ದೂರ) ಮಧ್ಯ ದಾರಿಯಲ್ಲಿ ಭೇಟಿ, ನಂತರ ಆ ಕಡೆಗೋ, ಈಕಡೆಗೋ ಪಯಣ ಮುಂದುವರಿಸುವುದು...
ಜೊತೆಗೆ ಅಲ್ಲಿ, ಇಲ್ಲಿ ಪ್ರವಾಸ, ಹೊರ ಸಂಚಾರ, ಪರಸ್ಪರ ಭೇಟಿ ಮುದುವರಿಯಿತು.
1985 ರಲ್ಲಿ ಅವರು ದುಬೈ ಯಲ್ಲಿ ಅವರ್ ಓನ್ ಇಂಗ್ಲಿಷ್ ಹೈ ಸ್ಕೂಲ್ ಬಂದು ಕೆಲಸಕ್ಕೆ ಸೇರಿದಾಗ, ನಾನೂ 1986   ರಲ್ಲಿ  ಅದೇ ಶಾಲೆಗೆ ಭೌತ ಶಾಸ್ತ್ರ ಅಧ್ಯಾಪಕನಾಗಿ ಸೇರಿಕೊಂಡು ನಮ್ಮ ಪಯಣ ಮುಂದುವರಿಯಿತು.
ಅವರು 2004 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದು, ನಾವು 2010 ರಲ್ಲಿ ವಾಪಾಸಾದೆವು.
ನಂತರವೂ ನಮ್ಮ ನಂಟು ಮುಂದುವರಿಯಿತು. ಅವರು ಮೈಸೂರಿನಲ್ಲಿ ಇದ್ದಾಗ ಭೇಟಿ ಮಾಡುತಿದ್ದೆವು.

ಅವರು ಅತ್ಯಂತ ಸ್ನೇಹ ಜೀವಿ, ಅವರೊಡನೆ ಸ್ವಲ್ಪ ಹೊತ್ತು ಸಮಯ ಕಳೆದರೆ, ಕೆಲವು ಹಾಸ್ಯ ಚಟಾಕಿ ಗಳನ್ನು ಉನಬಡಿಸುವರು.

With Grand daughters
ಸದ್ಯಕ್ಕೆ ಮಾರತ್ ಹಳ್ಳಿ ಯ ಹತ್ತಿರ ಮಗ ತ್ರಿವಿಕ್ರಮನ ಮನೆಯಲ್ಲಿ ವಾಸವಾಗಿರುವರು.
ಅವರ ಆರೋಗ್ಯ ಚೆನ್ನಾಗಿದ್ದು ಸಂತಸ, ನೆಮ್ಮದಿಯಿಂದ ಬದುಕು ಮುಂದುವರಿಯಲಿ ಎಂದು ಶುಭ ಹಾರೈಕೆಗಳು.
ಬರೆದಿರುವುದು 1/11/2022 




No comments:

Post a Comment