Tuesday, November 8, 2022

PARTIAL LUNAR ECLISE (ಚಂದ್ರಗ್ರಹಣ)

 Tuesday, November 8, 2022


Partial Lunar Eclipse seen in the evening from our (BirthiMane) Terrace.


ಚಂದ್ರಗ್ರಹಣ

ಪಂಚಾಂಗ ರೀತ್ಯಾ ಮಧ್ಯಾಹ್ನ 2.39 pm. ಗ್ರಹಣಾರಂಭ. ಆದರೆ ಆಚರಣೆ ಸೂರ್ಯಾಸ್ತ ನಂತರ 

ಮಧ್ಯಾಹ್ನ ಚಂದ್ರಗ್ರಹಣ ಗ್ರಸ್ಥವಾಗಿದ್ದರೂ ಭಾರತ ದೇಶದಲ್ಲಿ ಆ ಸಮಯದಲ್ಲಿ ಸೂರ್ಯನಿರುತ್ತಾನೆ. ಸೂರ್ಯ ಮುಳುಗಿದ ನಂತರವಷ್ಟೇ ಚಂದ್ರಗ್ರಹಣ ಅನುಷ್ಠಾನ. ಆದ್ದರಿಂದ ಸ್ಥಳೀಯ ಕಾಲಮಾನ ರೀತ್ಯಾ ಸೂರ್ಯಾಸ್ತ ಸಮಯವನ್ನು ನೋಡಿಕೊಂಡು ಗ್ರಹಣ ಆಚರಣೆ ಮಾಡಬೇಕು.

ಬೆಂಗಳೂರು ನಗರದಲ್ಲಿ ಸೂರ್ಯಾಸ್ತ ನಾಳೆ 5.51pm. ಆದ್ದರಿಂದ 5.51ರಿಂದ ಸ್ನಾನ ಮಾಡಿ 6.19ರ ಪರ್ಯಂತ ಜಪ ಪಾರಾಯಣ ತರ್ಪಣಾಧಿಗಳು ಮಾಡತಕ್ಕದ್ದು. ನಿಮ್ಮ ಸ್ಥಳೀಯ ಸಮಯಾನುಸಾರ ಗ್ರಹಣ ಆರಂಭ ಸಮಯವನ್ನು ತಿಳಿದುಕೊಳ್ಳಿ. ಸಮಾಪ್ತಿ ಭಾರತದಾದ್ಯಂತ ಒಂದೇ ಸಮಯ 6.19 pm. ಆರಂಭ ಸಮಯ ಮಾತ್ರ ಸ್ವಲ್ಪ ವ್ಯತ್ಯಾಸ ಇರಬಹುದು.

ಸಂಜೆ ಗ್ರಹಣ ಸಮಾಪ್ತಿ ನಂತರ ಅಂದರೆ 6.19 ನಂತರ ಸ್ನಾನ ಮಾಡಿ,. ದೇವರ ಪೂಜೆ ಮಾಡಿ, ಅಡುಗೆ ಮಾಡಿ, 

ನಂತರ ಭೋಜನ ಮಾಡಬೇಕು.


Posted 9/11/2022


No comments:

Post a Comment