ಭಾನುವಾರ, 16 ಜುಲೈ 2023
ರವೀಂದ್ರ ಕಲಾಕ್ಷೇತ್ರ ಬೆಂಗಳೂರು.
ಸಂಗೀತ, ನ್ರತ್ಯ, ಸನ್ಮಾನ - ಸಂಗಿತರತ್ನ ವಿದ್ಯಾಲಯದ ಕಾರ್ಯಕ್ರಮ
ನಾವು ಸಂಜೆ ಆರು ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಹೋದಾಗ ಸನ್ಮಾನ, ಭಾಷಣದ ಕಾರ್ಯಕ್ರಮ ಮುಗಿದು, ವೇದಿಕೆಯು ಗೊಂದಲದ ಗೂಡಾಗಿತ್ತು.
ಸಭಿಕರು, ಅಭಿಮಾನಿಗಳು , ಕಲಾವಿದರುಗಳ ಸೆಲ್ಫಿ ತೆಗೆಯುವ ಅವಸರದಲ್ಲಿ ಹತ್ತಿರದಿಂದ ನೋಡುವ ತವಕದಿಂದ ಹಲವಾರು ಮಂದಿ ವೇದಿಕೆಗೆ ಲಗ್ಗೆ ಇಟ್ಟಿದರು.
ಅದು ಸಂಗೀತ ರತ್ನ ವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮ, ಖ್ಯಾತ ಗಾಯಕಿಯರಾದ ಪದ್ಮ ಭೂಷಣ ಶ್ರೀಮತಿ ಪಿ. ಸುಶೀಲಾ, ಹಾಗೂ ಎಲ್.ಅರ್. ಈಶ್ವರಿ ಅವರಿಗೆ ಸನ್ಮಾನ ಸಮಾರಂಭ.
ಶ್ರೀ ಗುರುರಾಜ್ ಅವರ ತಂಡದಿಂದ ಸಂಗೀತ, ನ್ರತ್ಯ ಕಾರ್ಯಕ್ರಮ, ಒಟ್ಟಾರೆ ಕೆಳಮಟ್ಟದ ಅಭಿರುಚಿಯ ಪ್ರಸ್ತುತಿ.
ಶ್ರೀಮತಿ ಎಂ.ಡಿ. ಪಲ್ಲವಿಯವರ "ದೀಪವು ನೀನೇ, ಗಾಳಿಯು ನೀನೇ" ಹಾಡು ಸೊಗಸಾಗಿತ್ತು.
ಇನ್ನೂ ಗಾಯಕರು, ಗಾಯಕಿಯರು ಹಾಡಲು ಅವಕಾಶಕ್ಕೆ ಕಾಯುತಿದ್ದರು.
ನಾವು ಸುಮಾರು ಎರಡು ಗಂಟೆಗಳ ಇದ್ದು ವಾಪಸ್ಸು ಮನೆಗೆ ಬಂದೆವು.
ವಿದ್ಯಾ, ಊರ್ವಿ ನಮ್ಮೊಡನೆ ಇದ್ದರು. ಊರ್ವಿಯ ಪೂರ್ವ ಸಿದ್ದತೆಯಿಲ್ಲದ ನ್ರತ್ಯ ಚೆನ್ನಾಗಿತ್ತು.
ಬರೆದಿರುವುದು 18/7/2023
No comments:
Post a Comment