ಭಾನುವಾರ, 23 ಜುಲೈ 2023
ಕಡಿಯಾಳಿ, ಉಡುಪಿ
ವಿಜಯಲಕ್ಷ್ಮಿ ಅವರು ಮಡದಿ ನಳಿನಿಯ ತಂಗಿ (ಸಹೋದರಿ), ಕಡಿಯಾಳಿಯಲ್ಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಅವರ ಮನೆ, ಪತಿ ರಾಮಚಂದ್ರ ಭಟ್.
ಮಗ ಸಂತೋಷ್ ಬೆಂಗಳೂರಿನಲ್ಲಿ ಕೆಲಸ, ಮಗಳು ಸುಪ್ರಿಯ, ಗಂಡ ಪ್ರೇಮ್ ಅವರ ಜತೆಯಲ್ಲಿ ಅಮೇರಿಕಾದ ಫೀನಿಕ್ಷ್ ನಲ್ಲಿ ವಾಸ. ಕೆಲಸ .ಅವಳಿಗೆ ಎರಡು ತಿಂಗಳ ಹಿಂದೆ ಮಗನ ಜನನ, ಅವ್ಯಾನ್...
ವಿಜಯಲಕ್ಷ್ಮಿ ಅವಳು ಬಹುಮುಖ ಪ್ರತಿಭೆಯ ಮಹಿಳೆ, ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ....
ಅವಳು ತೊಡಗಿಸಿ ಕೊಂಡಿರುವ ವಿವಿಧ ಚಟುವಟಿಕೆಗಳಾದ,
ಸಹೋದರಿಯರು |
ಹುಣುಸೂರಿನಲ್ಲಿ |
ಪ್ರಾಣಿ ಪ್ರಿಯರು - ನಳಿನಿ, ವಿಜಯಾ |
ದೇಗುಲ ದರ್ಶನ,
ಪುಣ್ಯ ಕ್ಷೇತ್ರಗಳಿಗೆ ಪ್ರವಾಸ,
ತಿರುಪತಿಯ ಪ್ರವಾಸ ಕಥನ:
ಕಡಿಯಾಳಿಯಲ್ಲಿ ವಿವಾಹ ವೇದಿಕೆಯಲ್ಲಿ ಸಕ್ರಿಯ ಭಾಗವಹಿಸುವಿಕೆ,
ಅವರ ಮಹಿಳಾ ತಂಡದವರೊಂದಿಗೆ ಭಜನೆ, ಶೋಭಾನೆ ಹಾಡುವಿಕೆ,
ಮನರಂಜನಾ ಕಾರ್ಯಕ್ರಮಗಳಲ್ಲಿ ನ್ರತ್ಯ, ಹಾಡು ಇತ್ಯಾದಿ...
ಇತ್ತೀಚಿಗಿನ ವಾರ್ಷಿಕ ಸಮಾರಂಭ ದಲ್ಲಿ ಸಕ್ರಿಯವಾದ ಪಾತ್ರ....
ಪಂಡರಾಪುರದ ವಿಟೋಬಾ - ವಿಜಯಲಕ್ಷ್ಮಿ ಭಟ್
ನ್ರತ್ಯ ತಂಡ |
ತಿರುಪತಿಯ ಪ್ರವಾಸ ಕಥನ:
ಶುಭೋದಯ.ಶ್ರೀ ವೇದವ್ಯಾಸ ನಮಃ..................
ತಿರುಪತಿ ಪ್ರವಾಸ ದ ಬಗ್ಗೆ ಒಂದೆರಡು ತುಣುಕುಗಳು.......
ಕಡಿಯಾಳಿ ಭಜನಾ ಮಂಡಳಿಯು...ಶೋಭಕ್ಕನೊಂದಿಗೆ, 1 ಘಂಟೆ 45 ನಿಮಿಷಕ್ಕೆ ಕಡಿಯಾಳಿ ಅಮ್ಮನ ಪ್ರಾರ್ಥನೆ.ಹರಿಕಥಾಮೃತಸಾರದ ಮಂಗಳಾಚರಣ ಸಂಧಿಯನ್ನು ,ಹೇಳಿಕೊಳ್ಳುತ್ತಾ. ಹೊರಟೆವು....
ಗಮ್ಮತ್ತೋ ಗಮ್ಮತ್.ಒಂದೊಂದೇ ನೆನಪಿನ ಅಂಗಳದಲ್ಲಿ ತೇಲಾಡುತ್ತಾ ಬಂದವರಲ್ಲಿ ತಂದಂತಹ ತಿಂಡಿ.ಕೋಡುಬಳೆ, ಸೋಂಟೆ, ಬಿಸ್ಕೆಟ್.ಅದೂ ,ಇದೂ ತಿನ್ನುತ್ತಲೇ. ಹೊರಟೆವು....ಶೋಭಾನೆ., ವಿಷ್ಣುಸಹಸ್ರನಾಮ.ಸ್ವಲ್ಪ ಭಜನೆ. ಹೀಗೆ ಸಾಗುತ್ತಾ ರಾತ್ರಿ, ಗುಂಡ್ಯ ಅನ್ನುವಲ್ಲಿ , ತಂದಂತಹ ಕಡುಬು ,ಕಾಯಿರಸ ಹಾಕಿ ತಿಂದೆವು.. ಒಳ್ಳೆಯ, ಊಟ ಆಯ್ತು.
ರಾತ್ರಿ ನಾವಂತೂ ,ಅಲ್ಲಿಯೇ ಮಲಗಿದೆವು..... ಬೆಳಿಗ್ಗೆ 5 ವರೆಗೆ. ತಿರುಪತಿ ಗೆ ಬಂದೆವು.
ಇಲ್ಲಿ ಸ್ನಾನ ಮಾಡಿ ಉಪ್ಪಿಟ್ಟು ಶೋಭಕ್ಕನ ಚಪಾತಿ ತಿಂದೆವು.
ಈಗ , ಗೋವಿಂದರಾಜ ಪಟ್ಟಣ ನೋಡಲು ,ರಿಕ್ಷಾದಲ್ಲಿ ಹೋದೆವು...
ಇದು ,ರೈಲ್ಪೆ ಸ್ಟೇಷನ್ ಹತ್ತಿರ ಉಂಟು.
ರಾಮಾನುಜಾಚಾರ್ಯರು, ಸ್ಥಾಪಿಸಿದ್ದು ಎನ್ನುತ್ತಾರೆ. ಈ ದೇವಸ್ಥಾನದ, ಸುತ್ತಮುತ್ತ ತಿರುಪತಿ ನಗರವನ್ನು ,ನಿರ್ಮಿಸಿದ್ದಾರೆ .
ಗೋವಿಂದ ರಾಜ ದೇವರು ಪ್ರದಾನ ದೇವರು. ಯೋಗಾನಿದ್ರೆಯಲ್ಲಿ, ಪೂರ್ವಕ್ಕೆ ಮುಖ ಮಾಡಿ ,ಬಲಕೈಯನ್ನು ,ತಲೆಯ ಕೆಳಗೆ, ಎಡಕೈಯನ್ನು ,ದೇಹದ ಮೇಲೆ ಇಟ್ಟುಕೊಂಡಿರುವ ಭಂಗಿಯಲ್ಲಿದೆ. ವಿಷ್ಣುವಿ ಪತ್ನಿಯರಾದ ಶ್ರೀದೇವಿ ಭೂದೇವಿ, ಗೋವಿಂದ ರಾಜನ ಪಾದದಲ್ಲಿ ,ಕುಳಿತಿರುವ ಭಂಗಿಯಲ್ಲಿದೆ.
ಇಲ್ಲಿಯೇ ಪಾರ್ಥಸಾರಥಿ, ಕಲ್ಯಾಣ ವೆಂಕಟೇಶ್ವರ, ಅಂಡಾಳ್ , ಆಂಜನೇಯ, ಭಾಷ್ಯಕಾರರ ಗುಡಿಯೂ ,ಇದೆ.. ಮತ್ತೆ ಪದ್ಮಾವತಿ , ತಿರುಚಾನೂರು ದೇವಸ್ಥಾನ ಕ್ಕೆ ಹೊರಟೆವು.
ಇಲ್ಲಿಯೂ, ಸ್ವಲ್ಪವೂ ಕಷ್ಟ ಆಗದೆ. ದೇವರ ದರ್ಶನ ಆಯ್ತು
ವಿಜಯನಗರದ ಸಾಳ್ವ ನರಸಿಂಹ ರಾಯನ ಗುರುಗಳಾದ ವ್ಯಾಸರಾಯರು , ಒಂದಾನೊಂದು ಸಂಧರ್ಭದಲ್ಲಿ ,12 ವರ್ಷಗಳ ಕಾಲ ಪೂಜೆ ಮಾಡಿದ್ದರು .ಈ ಸಂದರ್ಭದಲ್ಲಿ ಇಲ್ಲಿಂದಲೇ ಹೋಗುತ್ತಿದ್ದರು.
ಭಗವಂತನ,ಪಾದಗಳನ್ನು ನಮಿಸಿ ,ನಡಿಗೆಯನ್ನು ಪ್ರಾರಂಬಿಸಿದ ನಂತರ ಮೊದಲು ಸಿಗುವುದು,ಗುರಪ್ಪ ಚಿಂತಲ ನಾರವ .ಇದು ಒಂದು ಕುದುರೆಯ ಸಮಾಧಿ.
ಶ್ರೀಕೃಷ್ಣ ದೇವರಾಯ ನ ಕಾಲದಲ್ಲಿ , ದಿನಾ ಒಂದು ಕುದುರೆ ಓಡಿ ಬರುತ್ತಿತ್ತಂತೆ. ಓಡಿ ಬಂದೇ ಪ್ರಾಣಬಿಟ್ಟಿತ್ತಂತೆ. ,ಇದರ ಸ್ಮರಣೆಗೆ ಕಟ್ಟಿದ್ದು. ಇದೆಲ್ಲಾ, ಏನೂ ಗೊತ್ತಾಗೋಲ್ಲ. ಅಷ್ಟರ ಮಟ್ಟಿಗೆ ನಿಧಿಯೇನೋ ಎಂದು ಒಡೆದು ಹಾಕಿದ್ದಾರೆ. ಇನ್ನು ಮುಂದೆ ಸಾಗುತ್ತಾ. ಕೋಳಿ ಕೂಗುವ ಬಾವಿ ಉಂಟು. ಇದೂ ಶಿಥಿಲಗೊಂಡಿದೆ
ಸುಮ್ಮನೆ ಆ ಜಾಗ ಅಂತ ತೋರಿಸಬೇಕಷ್ಟೇ.
ಇನ್ನು ಒಂದು ಪಾಳುಬಿದ್ದ ಮಂಕಪ.
ಮೊದಲು ಇದರ ತುಂಬಾ ಶಂಖ,ಚಕ್ರ, ಗದಾ ಪದ್ಮ,ಹಾಕಿಕೊಂಡಂತಹ ದೇವತಾ ಶಿಲ್ಪಗಳು ಇತ್ತಂತೆ.
ಇದೂ ಶಿಥಿಲಗೊಂಡಿದೆ.
ಇಲ್ಲಿಂದ ಉಸಿರು ಬಿಗಿ ಹಿಡಿದು ಕೊಂಡರೆ.. ಮುಂದೆ, ರಮಣೀಯ ದೃಶ್ಯ ವನ್ನು ನೋಡುತ್ತೇವೆ. ಬಾರೀ ಸೊಬಗು, ಆಚೆ ಈಚೆ ಮರ ಗಿಡಗಳು ಪ್ರಕೃತಿ ಸೌಂದರ್ಯ ವನ್ನು ಅನುಭವಿಸಬೇಕು.ಹೇಳಿದಂತೆ ಅಲ್ಲ. ಬೆಟ್ಟದ ಅಂಚಿನಿಂದ ನೀರು ಹರಿಯುತ್ತಿರುವುದು. ತುಂತುರು ಹನಿಗಳು ಬಿದ್ದು.ಬಹಳ ಆಹ್ಲಾದಕರ ವಾಗುತ್ತಿತ್ತು.....ಇನ್ನೂ ಮುಂದೆ ಹೋದಾಗ ಒಂದೆರಡು ಶಿಥಿಲವಾದ ಕಂಬಗಳುಂಟು. ಇಲ್ಲಿ ಏಳುತಂಗಿಯರ ಸ್ಥಾನವಿದೆಯಂತೆ.
ಇಲ್ಲಿಯೂ ಭಕ್ತರು ಆ ದಿಕ್ಕಿಗೆ ಗಂದದಕಡ್ಡಿಯಿಂದ ಪೂಜೆ ಸಲ್ಲಿಸುತ್ತಾರೆ...( ಕೆಲವರು ಮಾತ್ರ).
ಮತ್ತೆ ಮುಂದೆ ,ಇನ್ನೂ ಕಡಿದಾದ ದಾರಿ. ಭಕ್ಕರು ,ಹಚ್ಚಿದ ಅರಿಶಿನ ಕುಂಕುಮ,ಮೆಟ್ಟಿಲಿಗೆ ಮಳೆಯ ನೀರೂ .ಅಲ್ಲಲ್ಲೀ ವ್ಯವಸ್ಥಿತವಾದ ಕುಡಿಯುವ ನೀರು ಚೆಲ್ಲಿ , ಮೆಟ್ಟಿಲು ಸಮಾ ಜಾರುತ್ತೆ. ಕಡಿದಾದ ದಾರಿ ,ಬಾರವಾಗಿ ಹತ್ತಿದರೆ ಜಾರುವ ಮೆಟ್ಟಿಲು, ಜೀವ ,ಬಿಗಿ ಹಿಡಿದು ಶ್ರೀನಿವಾಸ ತಂದೆ ಕರೆಸಿಕೋ ಹೇಳುತ್ತಾ ಅಧಮನೂ , ಸ್ವಾಮಿಯನ್ನು ನೆನೆಯಬೇಕು. ಹಾಗೆ ಮಾಡಿಸುವ ದಾರಿ. ಹತ್ತುತ್ತಾ ಮೇಲೆ ಬಂದಾಗ . ಒಂದು ಕಲ್ಲಿನ ಮೇಲೆ ಸುದರ್ಶನ ಚಕ್ರ,ಶಂಖ ಫಲಕ ಉಂಟು. ಮತ್ತೆ ಶ್ರೀದೇವಿ ಭೂದೇವಿ ಯೊಡನೆ ವೆಂಕಟೇಶ್ವರ.
ಸೀತಾಲಕ್ಷ್ಮಣ ,ಸಹಿತ ಶ್ರೀರಾಮಚಂದ್ರನೂ ಇದ್ದಾನೆ.
ಇದು ಬಂತಾದಾಗ. ಇನ್ನು ನೂರು ಮೆಟ್ಟಿಲು ಅಷ್ಟೇ. ಉಸಿರು ಎಳೆಯೋದು ಬಿಡೋದು ಅಂದುಕೊಂಡಷ್ಟರಲ್ಲಿ ಬಂದೇ ಬಿಟ್ಟಿತು. ಶಿಲ್ಪ ಶೋಭಿತ ,ರಥ ಮಂಟಪ ಸ್ವಾಗತಿಸುತ್ತದೆ. .
ನಮಗಂತೂ , ತೆಂಕಿಲ್ಲಾಯರು ನಮ್ಮೊಂದಿಗೆ ಇದ್ದು ಸಹಕರಿಸಿದರು.
ಅವರಿಗೂ ಕೋಟಿ ನಮನಗಳು.
ನಾವೊಂದು ಐದು ಆರು ಜನ ಬಹಳ ಮೆಲ್ಲ ಹತ್ತಿದೆವು. ಎಲ್ಲವನ್ನೂ ನಿದಾನ ನೋಡಿ ಮೇಲೆ ಬಂದು ಬ್ಯಾಗ್ ತೆಗೆದುಕೊಂಡು.ಉತ್ತರಾದಿ ಮಠಕ್ಕೆ ಬಂದೆವು ಅಲ್ಲಿ ಊಟ ಮಾಡಿ , ಪುಷ್ಪಗಿರಿ ಕಲ್ಯಾಣ ಮಂದಿರದಲ್ಲಿ ಮಲಗುವ ವ್ಯವಸ್ಥೆ ಆಗಿತ್ತು. ಅಲ್ಲಿ ಮಲಗಿ , ಬೆಳಿಗ್ಗೆ. ಸ್ನಾನ ಮಾಡಿ..ವರಾಹ ಸ್ವಾಮಿ ಯನ್ನು ನೋಡಿದೆವು
ಅವರು ಕೊಟ್ಟ ಟಿಕೆಟ್ ಇಟ್ಟುಕೊಂಡು, ಸ್ವಾಮಿ ಗಳ ಒಟ್ಟು ಶ್ರೀನಿವಾಸನ ದರ್ಶನ ಮಾಡಿದೆವು
ಅದೂ ಒಂದೇ ಗುಡಿಯ ಹತ್ತಿರವೇ. ಅಬ್ಬಾ ಜನ್ಮ, ಸಾರ್ಥಕವಾಯಿತು.
ಅಷ್ಟು ಹತ್ತಿರ ನೋಡಿದೆವಲ್ಲವೇ..... ಯಾರಿಗುಂಟು ಈ ಭಾಗ್ಯ,
ಮತ್ತೆ ಉತ್ತರಾದಿ ಮಠಕ್ಕೆ ಹೋಗಿ ,ಊಟ ಮಾಡಿ ಸ್ವಾಮಿ ಗಳ ಹತ್ತಿರ ಮಂತ್ರಾಕ್ಷತೆ ಪಡೆದೆವು...... ರಾತ್ರಿ ಗೆ.ಬೇಕಾದ ಫಲಾಹಾರ, ವ್ಯವಸ್ಥೆ ಯೂ ಆಯ್ತು. ಮುಳಬಾಗಿಲು ಬಂದು ಅಲ್ಲಿ ಯೋಗಾನರಸಿಂಹನನ್ನು, ಮುಖ್ಯ ಪ್ರಾಣ ದೇವರು ,ಶ್ರೀಪಾದರಾಜರನ್ನು ನೋಡಿದೆವು. ನರಸಿಂಹ ತೀರ್ಥ ವನ್ನು ಪ್ರೋಕ್ಷಣೆ ಮಾಡಿ ಕೊಂಡೆವು ತಂದಂತಹ ಬಿಸಿಬೇಳೆ ಭಾತ್. ಬಾರೀ ಲಾಯಕ್ಕಿತ್ತು..ಮತ್ತೆ ಉಡುಪಿಗೆ ಬೆಳಿಗ್ಗೆ ಬಂದೆವು.
ನಮ್ಮನ್ನು , ಕರೆದುಕೊಂಡು ಹೋದಂತಹ ಶೋಭಕ್ಕನಿಗೆ ,ಸಹ ಕರಿಸಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು.......
--ವಿಜಯಲಕ್ಷ್ಮಿ ಭಟ್
ಪೋಸ್ಟ್ ಮಾಡಿರುವುದು 25/7/2023
No comments:
Post a Comment