ಭಾನುವಾರ, ಅಕ್ಟೋಬರ್ 16, 2022
ತರಳಬಾಳು ಕೇಂದ್ರ ಗ್ರಂಥಾಲಯ, ಅರ್. ಟಿ. ನಗರ, ಬೆಂಗಳೂರು.
ಕೋಟ ಡಾ ಶಿವರಾಮ ಕಾರಂತರ 121 ನೇ ಜನ್ಮ ದಿನಾಚರಣೆಯು ಭಾನುವಾರ, 16 ನೇ ತಾರೀಕು ತರಳಬಾಳು ಕೇಂದ್ರದ ಗ್ರಂಥಾಲಯದಲ್ಲಿ ಸಂಪನ್ನ ಗೊಂಡಿತು.
ಮುಖ್ಯ ಅತಿಥಿಗಳಾಗಿ ಶ್ರೀ ಕರ್ಕಿ ಕೃಷ್ಣಮೂರ್ತಿ, ಕತೆಗಾರ, ಕಾದಂಬರಿಕಾರ ಅವರಿಂದ "ಕಾರಂತರ ಕಾದಂಬರಿಗಳ ಕೆಲವು ಒಳ ನೋಟಗಳು", ಮತ್ತು ಶ್ರೀ ವಿಕ್ರಮ ಹತ್ವಾರ, ಕತೆಗಾರ, ಅವರಿಂದ "ಸಾಹಿತ್ಯಿಕ ವ್ಯಕ್ತಿತ್ವವಾಗಿ ಕಾರಂತರು" ಎಂಬ ವಿಷಯದ ಬಗ್ಗೆ ಅರ್ಥ ಪೂರ್ಣವಾಗಿ ಉಪನ್ಯಾಸ ನೀಡಿದರು.
ಶ್ರೀ ಕರ್ಕಿ ಕೃಷ್ಣಮೂರ್ತಿ ಅವರು ತಮ್ಮ ಉಪನ್ಯಾಸದಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳು", "ಸರಸಮ್ಮನ ಸಮಾಧಿ" ಮತ್ತು "ಹುಚ್ಚು ಮನಸ್ಸಿನ ಹತ್ತು ಮುಖಗಳು" ಕಾದಂಬರಿ ಯಲ್ಲಿಯ ಕೆಲವು ಒಳನೋಟಗಳನ್ನು ಸ್ವಾರಸ್ಯವಾಗಿ ವಿವರಿಸಿದರು.
ಕರ್ಕಿ ಕೃಷ್ಣಮೂರ್ತಿ |
ವಿಕ್ರಮ್ ಹತ್ವಾರ್ |
ಶ್ರೀ ವಿಕ್ರಮ್ ಹತ್ವಾರ ಅವರು ತಮ್ಮ ಉಪನ್ಯಾಸದಲ್ಲಿ "ಸಾಹಿತ್ಯಿಕ ವ್ಯಕ್ತಿತ್ವವಾಗಿ ಕಾರಂತರು" ಎಂಬ ವಿಷಯವಾಗಿ ಸ್ವಾರಸ್ಯವಾಗಿ ಮಾತನಾಡಿದರು.
ಶ್ರೀಮತಿ ದೀಪಾ ಫಡ್ಕೆ |
ಪ್ರಾರಂಭ ದಲ್ಲಿ ಆದಿತ್ಯ ಅವರಿಂದ ಪ್ರಾರ್ಥನೆಯಾದ ನಂತರ ಶ್ರೀಮತಿ ದೀಪಾ ಫಡ್ಕೆ, ಅಧ್ಯಕ್ಷರು, ಕಾರಂತ ವೇದಿಕೆ ಅವರಿಂದ ಅತಿಥಿಗಳ ಪರಿಚಯ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ರಾಜೇಶ್ವರಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಶ್ರೀ ಸುಧೀಂದ್ರ ಅವರಿಂದ ಧನ್ಯವಾದ ಸಮರ್ಪನೆಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಗಿತು.
ಶ್ರೀ ರಮೇಶ್ ಗೋಟ ಅವರ ಪ್ರತಿಕ್ರಿಯೆ:
ಇಂದಿನ ಕಾರ್ಯಕ್ರಮದಲ್ಲಿ ಶ್ರೀಯುತ ಕರ್ಕಿ ಕೃಷ್ಣಮೂರ್ತಿಯವರು ಕಾರಂತರ ಕಾದಂಬರಿಗಳ ಕೆಲವು ಒಳ ನೋಟಗಳ ಬಗ್ಗೆ ಉಪನ್ಯಾಸ ಮಾಡುತ್ತಾ ಕಾರಂತರು ಸ್ತ್ರೀಯರನ್ನು ಪರಿಯನ್ನು ಬೇರೆಬೇರೆ ಕೋನದಲ್ಲಿ. ಆಕರ್ಷಕವಾಗಿ ತಿಳಿಸಿದರು. ಗಾಂಧೀಜಿಯವರಿಗೆ ತಾವು ೧೨೫ ವರುಷ ಬದುಕುವ ಭರವಸೆ ಇದ್ದಿದ್ದರೆ ಕಾರಂತರಿಗೆ ತಾವು ಇನ್ನು ೨೫ ವರುಷದ ನಂತರ ಹುಟ್ಟ ಬೇಕಾಗಿತ್ತೆಂಬ ಆಸೆ ಇದ್ದಿತ್ತೆಂಬ ಸಂಗತಿ ನೆನಪಾಯಿತು. ಶ್ರೀಯುತ ವಿಕ್ರಮ್ ಹತ್ವಾರರು ಕಾರಂತರಿಗಿದ್ದ ಹೊಸಹೊಸ ವಿಚಾರಗಳನ್ನು ಅರಿಯುವ ತೃಷೆಯನ್ನು ಚೆನ್ನಾಗಿ ತಿಳಿಸಿದರು. ಹೌದು, ಕಾರಂತರು ಮಾಡಿದ ಸಾಲಗಳನ್ನು ಹೇಗೆ ತೀರಿಸುತ್ತಿದ್ದರು ಎಂಬುದು ಕುತೂಹಲದ ಅಂಶವೆ. ಕಾರಂತರು ಬರೆದ ಪುಸ್ತಕಗಳ ಮಾರಾಟ ಹೆಚ್ಚಿದ್ದು ಅವರು ಕಾಲವಾದ ನಂತರವೆ. ಅವರು ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲಿಲ್ಲ. ಒಟ್ಟಿನಲ್ಲಿ ಕಾರಂತರಿಗೆ ಕಾರಂತರೆ ಸಮ!
ಬರೆದಿರುವುದು 17 ಅಕ್ಟೋಬರ್ 2022
No comments:
Post a Comment