ಅಕ್ಟೋಬರ್ 2, 2022
ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು, ಉಡುಪಿ
ನಾವು ಅಂದು ಸಂಜೆ ದೇವಸ್ಥಾನದ ದರ್ಶನಕ್ಕೆ ತೆರಳಿದಾಗ, ಅಲ್ಲಿ ಶ್ರೀ ಹಂದಾಡಿ ಸತ್ಯನಾರಾಯಣ ಭಟ್ಟ ಮತ್ತು ಅವರ ಪರಿವಾರದ ದರ್ಶನ....
ಅವರೂ ಅಂದು "ದೀಪ ನಮಸ್ಕಾರ"ದ ಪೂಜೆಯನ್ನು ಹಮ್ಮಿ ಕೊಂಡಿದ್ದು, ನಾವೂ ಅದರಲ್ಲಿ ಸೇರಿಕೊಳ್ಳುವ ಸುಯೋಗ ಲಭಿಸಿತು.
ನಮ್ಮ ದೊಡ್ಡಪ್ಪನ ಮಗಳು ಲಲಿತಾ-ಶ್ರೀನಿವಾಸ ಭಟ್ಟರ ಸುಪುತ್ರ ಸತ್ಯನಾರಾಯಣ ಭಟ್ಟರು.
ಬೆಂಗಳೂರಿನ ಲಗ್ಗೆರೆ ಎಂಬ ಸ್ಥಳದಲ್ಲಿ ಅವರ ಈಗಿನ ವಾಸ. ಕೃಷ್ಣವೇಣಿ ಅವರ ಧರ್ಮ ಪತ್ನಿ.
ದೀಪ ನಮಸ್ಕಾರ ಪೂಜೆಯು ನವರಾತ್ರಿಯ ಸಂದರ್ಭದಲ್ಲಿ ನಡೆಸುವುದು ಬಹಳ ವಿಶೇಷ.
ಅದೂ ಊರಿನ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ.....
ಭಟ್ಟರ ಕುಟುಂಬಕ್ಕೆ ಆಯುರಾರೋಗ್ಯ, ನೆಮ್ಮದಿ, ಐಶ್ವರ್ಯ ವನ್ನು ಆ ದೇವಿಯು ಕರುಣಿಸಲಿ ಎಂದು ನಮ್ಮ ಹಾರೈಕೆಗಳು.
ಪೂಜೆಯ ನಂತರ ಭರ್ಜರಿಯಾದ ಭೋಜನದ ವ್ಯವಸ್ಥೆಯೂ ಇತ್ತು.
ಊಟದ ನಂತರ ನಾವು ನಮ್ಮ ಮನೆ ಬಿರ್ತಿಯ ಕಡೆಗೆ ಹೊರಟೆವು.
ಬರೆದಿರುವುದು ಮಂಗಳವಾರ 11/10/2022
No comments:
Post a Comment