ಭಾನುವಾರ, 23 ಅಕ್ಟೋಬರ, 2022
ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಭಾಗವಾಗಿ, ಶ್ರೀ ಕ್ರಷ್ಣಪ್ರಸಾದ್ ಅವರ ಶ್ರಮದಿಂದ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಡಾ. ಆರ್ .ಆರ್. ಪಾಂಗಾಳ್ ವಿರಚಿತ ವಿನೂತನ ನವರಸ ಭರಿತ ಕಥಾ ಪ್ರಸಂಗ "ದ್ರೌಪದಿ ಅಪಹರಣ" ವನ್ನು "ಸುವರ್ಣ ಪ್ರಸಾಧನ ಯಕ್ಷರಂಗ" (ರಿ) ಅವರು ಪ್ರಸ್ತುತ ಪಡಿಸಿರುವರು.
ಕಥಾ ಪ್ರಸಂಗ "ದ್ರೌಪದಿ ಅಪಹರಣ" ದಲ್ಲಿ ಎರಡು ಭಾಗವಾಗಿದ್ದು, ಪ್ರಥಮ ಭಾಗದಲ್ಲಿ , ದ್ರೌಪದಿಯು ಕಾಡಿನಲ್ಲಿ ಪಾಂಡವರೊಂದಿಗೆ ಕಾನನ ದಲ್ಲಿ ಇದ್ದಾಗ ಜಯದ್ರಥ ಎಂಬ ರಾಕ್ಷಸ ನಿಂದ ಅಪಹರಿಸಲ್ಪಟ್ಟು ನಂತರ ಭೀಮನು ಅವನೊಡನೆ ಯುದ್ಧ ಮಾಡಿ ಅವನನ್ನು ಕೊಂದು ದ್ರೌಪದಿಯನ್ನು ಮುಕ್ತಳನ್ನಾಗಿ ಮಾಡುತ್ತಾನೆ.
ಧರ್ಮರಾಯನ ಸಮಾಧಾನದ ವರ್ತನೆ, ಭೀಮನ ಕೊಪಿಸ್ತ ನಡವಳಿಕೆ, ಅರ್ಜುನನ ಸೌಮ್ಯ ನಟನೆ, ದೌಪದಿಯ ಸುಂದರವಾದ ನೃತ್ಯ, ಅಭಿನಯ ಎಲ್ಲವೂ ಸುಂದರವಾಗಿತ್ತು.
ಎರಡನೇ ಭಾಗದಲ್ಲಿ ಸಿಂದು ರಾಜನಾದ, ಪಾಂಡವರ ಸಂಬಧಿ ಜಟಾಸುರನು ದ್ರೌಪದಿಯನ್ನು ನೋಡಿ ಮೋಹಗೊಂಡು ಅವಳನ್ನು ಅಪಹರಿಸುತ್ತಾನೆ.
ಇದನ್ನು ತಿಳಿದ ಪಾಂಡವರಲ್ಲಿ ಭೀಮನು ಅತ್ಯಂತ ಕೋಪಿಸ್ಟ್ನಾಗಿ ಅವನನ್ನು ಕೊಲ್ಲಲು ಮುಂದಾದಾಗ ಧರ್ಮರಾಯನು ಅವನನ್ನು ತಡೆದು, ಜಟಾ ಸುರನನ್ನು ಸೆರೆ ಹಿಡಿದು ಅವಮಾನ ಮಾಡುತ್ತಾರೆ.
ಭಾಗವತರಿಂದ ಹಾಡುಗಾರಿಕೆ, ಚಂಡೆ, ಮ್ರದಂಗ ಎಲ್ಲವೂ ಸುಂದರವಾಗಿತ್ತು.
ದೀಪಾ ಫಡ್ಕೆ, ಜಯರಾಮ ಸೋಮಯಾಜಿ, ಡಾ ಪಾಂಗಾಳ್, ಕೃಷ್ಣ ಪ್ರಸಾದ್ |
ಯಕ್ಷಗಾನ ಪ್ರಸಂಗ ವಿರಚಿತ ಡಾ ಅರ್.ಅರ್. ಪಾಂಗಾಳ್ ಅವರನ್ನು ವೇದಿಕೆಯ ಮೇಲೆ ಶಾಲು, ಹಾರಗಳಿಂದ ಸನ್ಮಾನಿಸಲಾಯಿತು
Posted on 24/10/2022
No comments:
Post a Comment