Friday, October 14, 2022

KADIYALI MAHISHAMARDINI TEMPLE NAVARATRI 2022

 ಸೋಮವಾರ, ಅಕ್ಟೋಬರ್ 3, 2022 

ಕಡಿಯಾಳಿ, ಉಡುಪಿಯ  ಹತ್ತಿರ.

ಕಡಿಯಾಳಿಯ ಮಹಿಷಮರ್ದಿನಿ ದೇವಾಲಯ ಅತ್ಯಂತ ಪುರಾತನ, 1200 ವರ್ಷಗಳ  ಇತಿಹಾಸವನ್ನು ಪಡೆದಿದೆ.




ಸುಮಾರು ೩೦ ಇಂಚು ಎತ್ತರದ ಈ ವಿಗ್ರಹದ ಮುಖದಲ್ಲಿ ಪ್ರಸನ್ನತೆಯ, ವಿಜಯದ ಮಂದಹಾಸವಿದೆ. ಮೇಲಿನ ಎರಡು ಕೈಗಳಲ್ಲಿ ಚಕ್ರ-ಶಂಖ, ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಅದರ ತುದಿಯ ಚೂಪು ಮೇಲುಮುಖವಾಗಿ ತಲೆಯ ಎತ್ತರಕ್ಕೆ ಸಮನಾಗಿ ನೇರವಾಗಿದ್ದು ಶಿಲ್ಪದ ಒತ್ತಿಂದಕ್ಕೆ ಒಂದು ಸವಂತೋಲವನ್ನು ತಂದಿದೆ. ಶೂಲದ ಕೆಳಬದಿ ದೇವಿಯ ಕಾಲಬುಡದಲ್ಲಿ ಸತ್ತುಬಿದ್ದಿರಿವ ಮಹಿಷನ ತಲೆಯನ್ನು ಒತ್ತಿ ಹಿದಿದಿದೆ. ಹಿಮ್ಗಾಲು ಎತ್ತಿ ಮುಗ್ಗರಿಸಿ ಬಿದ್ದ ಮಹಿಶನ ಬಾಲ ದೇವಿಯ ಎಡಗೈಯಲ್ಲಿದೆ.


ಇಲ್ಲಿ ಮಹಿಷಾಸುರನೂ ರಾಕ್ಶಸನ ಆಕಾರದಲ್ಲಿರದೆ ಸಹಜವಾದ ಕೋಣನಂತೆಯೇ ಆಅತಿಯನ್ನು ಆಕೃತಿಯನ್ನು ಚಿತ್ರಿಸಲಾಗಿದೆ. ಮಹಿಷ ನಮ್ಮ ಅಜ್ಞ್ನಾನ , ಆಲಸ್ಯ ಮಾಂದ್ಯಗಳ ಸಂಕೇತವಾದರೆ ದೇವಿ ಜ್ಞ್ನಾನಶಕ್ತಿಯ ಪ್ರತೀಕ, ತ್ರಿಶೂಲದ ಮೂರು ಮೊನೆಗಳೇ ಜ್ಞ್ನಾನಶಕ್ತಿ, ಇಚ್ಚಾಶಕ್ತಿ, ಕ್ತಿಯಾಶಕ್ತಿಗಳು. ಬಲಗೈಯ ಚಕ್ರವೇ ಸೃಷ್ತಿ ಚಕ್ರವೂ ಹೌದು, ಧರ್ಮ ಚಕ್ರವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು; ಓಂಕಾರದ ನಾದದ ಪ್ರತೀಕವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು.


ನಾವು ಈ ವರ್ಷದ ನವರಾತ್ರಿಯ ಸಂದರ್ಭದಲ್ಲಿ ದೇವಿಯ ದೇವಿಯ ದರ್ಶನ ಮಾಡಿ, ಅಂದಿನ ರಥೋತ್ಸವ ವನ್ನು ವೀಕ್ಷಿಸಿ, ಮಧ್ಯಾಹ್ನದ ಭೋಜನ ಪ್ರಸಾದವನ್ನು ಸ್ವೀಕರಿ
ಸಿದೆವು.

ನವರಾತ್ರಿ 2022 
ಇತ್ತೀಚಿಗೆ ಜೀರ್ನೋದ್ಧಾರ ಕಂಡ ದೇವಸ್ಥಾನ ಅತ್ಯಂತ ಸುಂದರವಾಗಿ ಕಾಣಿಸುತ್ತಿದೆ.



ಮಡದಿ ನಳಿನಿ ಯವರ ತಂಗಿಯ ಮನೆ ಅಲ್ಲಿಯೇ ಹತ್ತಿರದಲ್ಲಿದ್ದು, ಅಲ್ಲಿಗೂ ಭೇಟಿಯನ್ನು ನೀಡಿದ್ದೆವು.

ಅದೊಂದು ಸುಂದರವಾದ, ಮಳೆಗಾಲದ ಸಮಯದ ಸುಂದರವಾದ ದೃಶ್ಯ.

ಬರೆದಿರುವುದು 15/10/2022



No comments:

Post a Comment