Sunday, October 15, 2023

ಶಿವರಾಮ ಕಾರಂತರ 122 ನೇ ಹುಟ್ಟುಹಬ್ಬ - ಸಂಭ್ರಮ

 ಭಾನುವಾರ, 15/10/2023 

ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.

ಡಾ. ಕೋಟ ಶಿವರಾಮ ಕಾರಂತರ 122 ನೇ ಹುಟ್ಟು ಹಬ್ಬದ ಸಂಭ್ರಮ.


ಡಾ. ನಾ. ಸೋಮೇಶ್ವರ್ 
 "ಥಟ್ ಎಂದು ಹೇಳಿ" ಖ್ಯಾತಿಯ 
ಡಾ ನಾ. ಸೋಮೇಶ್ವರ್, ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.



ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ.ದೀಪಾ ಫಡ್ಕೆ ಅವರು, ಪ್ರಾಸ್ತಾವಿಕ ನುಡಿಗಳನ್ನು ಆಡಿ ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು.



ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು ಅತಿಥಿಗಳನ್ನು ಪರಿಚಯಿಸಿ, ಇತ್ತೀಚಿಗೆ ಮಂಗಳೂರಿನಲ್ಲಿ ಡಾ ನಾ.ಸೋಮೇಶ್ವರ ಅವರು "ಕಾರಂತ ಪ್ರಶಸ್ತಿ" ಗೆ ಭಾಜನಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿ, ಅಭಿನಂದಿಸಿದರು.
ಶಿವರಾಮ ಕಾರಂತರ ಹುಟ್ಟು ಹಬ್ಬ ಆಚರಣೆ-
ಬೆಂಗಳೂರಿನ ಆರ್ ಟಿ.ನಗರದಲ್ಲಿ.......
ದಿ:15.10.2023,
ಭಾನುವಾರ ಸಂಜೆ:4.00ಯಿಂದ ನಡೆದ
"ಶಿವರಾಮ ಕಾರಂತ ವೇದಿಕೆ(ರಿ)"ಯ ಕಾರ್ಯಕ್ರಮವು- ಸಾಹಿತ್ಯ ರಸದೌತಣವನ್ನು ಸಭಿಕರಿಗೆ ಉಣಬಡಿಸಿತು.
ಕನ್ನಡಿಗರ ಹೃದಯವನ್ನೂ ವಿಶ್ವಮಾನ್ಯತೆಯನ್ನೂ ಗಳಿಸಿರುವ ಕ್ವಿಜ್ ಮಾಸ್ಟರ್
ಡಾ. ನಾ. ಸೋಮೇಶ್ವರ ಸರ್ ಅಂತಹ ಅದ್ವಿತೀಯ ಸಾಧಕ ಗಣ್ಯರು ಉಪನ್ಯಾಸಕರಾಗಿ ಮಾತನಾಡಿದ್ದು ದಣಿವರಿಯದ ಉತ್ಸಾಹ ತುಂಬಿದ್ದ ಲೋಕಜ್ಞಾನದ, ಕಾಲಪ್ರಜ್ಞೆಯ ಒಳಹೊರಗೂ ಒಂದಾಗಿದ್ದ , ದಿಗ್ಭ್ರಮೆಯ ಸಾಧಕ ಕಡಲತೀರದ ಭಾರ್ಗವ ಶಿವರಾಮ ಕಾರಂತ ಎಂಬ ಧೀಮಂತಿಕೆ ವ್ಯಕ್ತಿತ್ವದ ಬಗ್ಗೆ,
ಜೊತೆಗೆ ವಿದ್ಯಾರ್ಥಿಗಳು ಹೇಗೆ ಓದಬೇಕು, ಎಲ್ಲಾ ವಯಸ್ಸಿನಲ್ಲೂ ಮಿದುಳಿನ ಕ್ರಿಯಾಶೀಲತೆಯಿಂದ ಇರಲು ಪಾಲಿಸಬೇಕಾದ ಅನೇಕ ವಿಷಯಗಳನ್ನು ತೆರೆದಿಟ್ಟರು.
ಉತ್ಕೃಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದ ವೇದಿಕೆ🙏


ಡಾ. ಸೋಮೇಶ್ವರ ಅವರು ತಮ್ಮ ಉಪನ್ಯಾಸದಲ್ಲಿ ಶಿವರಾಮ ಕಾರಂತರ ಜೀವನ ಶ್ರದ್ಧೆ, ಬದುಕಿದ ರೀತಿ, ಅವರು ನಂಬಿ ಕೊಂಡು ಬಂದ ಮೌಲ್ಯಗಳು, ಸಾಧನೆಗಳನ್ನು ವಿಸ್ತಾರವಾಗಿ ಪರದೆಯ ಮೇಲೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.


ಹಾಗೆಯೇ ಮಕ್ಕಳ ಕಲಿಕಾ ವಿಧಾನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.



ಶ್ರೀಮತಿ ಶಶಿಕಲಾ ಅವರಿಂದ ಧನ್ಯವಾದ ಸಮರ್ಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.



ಉದಯವಾಣಿ 16/10/2023 


ಶಿವರಾಮ ಕಾರಂತ ವೇದಿಕೆಯ ಮಹಾ ಸಭೆ:

ಮೇಲಿನ ಕಾರ್ಯಕ್ರಮದ ಮುಂಚೆ ವೇದಿಕೆಯ ವಾರ್ಷಿಕ ಮಹಾ ಸಭೆ ಜರುಗಿತು.


ಕೆಲವೇ ಸದಸ್ಯರ ಹಾಜರಿಯಲ್ಲಿ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಕಾರಂತ ವೇದಿಕೆಯು ಸಾಹಿತ್ಯಿಕ, ಸಾಂಸ್ಕ್ರತಿಕ ವೇದಿಕೆಯಾಗಿದ್ದು, ಹಿರಿಯ ಸದಸ್ಯರು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು  ತಮ್ಮ ಮಕ್ಕಳ, ಬಂಧುಗಳ "ನಾಮ ನಿರ್ದೇಶನ" ಮಾಡುವಂತೆ ಮನವಿ ಮಾಡಿದರು.

ಕಾರ್ಯದರ್ಶಿ ಶಶಿಕಲಾ ಅವರು, 2022 - 23 ಅವಧಿಯಲ್ಲಿ ನಡೆದ 13 ಕಾರ್ಯಕ್ರಮಗಳ ವರದಿ, ಸಂಸ್ಥೆಗೆ ಶ್ರಮಿಸಿದ ಎಲ್ಲರಿಗೆ ಕ್ರತಜ್ನತೆ ಸಲ್ಲಿಸಿದರು.

ಈ ಅವಧಿಯಲ್ಲಿ ನಮ್ಮನಗಲಿದ ಹಿರಿಯರಾದ  ಶ್ರೀಯುತ ಸಿ.ಅರ್. ಸತ್ಯ , ಹಾಗೂ ಶ್ರೀ ರಾಮಯ್ಯ ನವರಿಗೆ ಗೌರವ ಶ್ರದ್ಧಾಂಜಲಿ ಯನ್ನು  ಅರ್ಪಿಸಲಾಯಿತು.

ಇದೇ ಅವದಿಯ ಖರ್ಚು ವೆಚ್ಚಗಳ ವಿವರಗಳನ್ನು ವೇದಿಕೆಯ  ಕೋಶಾಧಿಕಾರಿ ಶ್ರೀ ಜಯರಾಮ ಸೋಮಯಾಜಿ ಅವರು ಮಂಡಿಸಿ ಅದನ್ನು ಅನುಮೋದಿಸಲಾಯಿತು.

ವೇದಿಕೆಯ ಉಪಾಧ್ಯಕ್ಷ ಶ್ರೀಯುತ ವೀರಶೇಖರ ಸ್ವಾಮಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಬರೆದಿರುವುದು 16/10/2023 


No comments:

Post a Comment