Tuesday, October 10, 2023

ಮಹಾಪತನ - ಕಾದಂಬರಿ

 ಅಕ್ಟೋಬರ್ 11, 2023, ಬುಧವಾರ.

"ಮಹಾಪತನ" - ಸಂತೋಷಕುಮಾರ ಮೆಹೆಂದಳೆ  


ಸಂತೋಷ್ ಕುಮಾರ್ ಮೆಹೆಂದಳೆ ಅವರ, 374 ಪುಟಗಳ  "ಮಹಾಪತನ" ಒಂದು ಅದ್ಭುತವಾದ ಕಾದಂಬರಿ.

ನಾನು ಸ್ವಲ್ಪ ನಿಧಾನವಾದ ಓದುಗ, ಹಲವು ದಿನಗಳೇ ಕಳೆಯಿತು, ಆದರೂ ಕೊನೆಗೆ ಕಾದಂಬರಿಯನ್ನು ಓದಿ ಮುಗಿಸಿದಾಗ ಮಹಾಭಾರತದ ಸುಯೋಧನನ ಬಗ್ಗೆ ಕನಿಕರ, ಮೆಚ್ಚುಗೆ, ಗತ್ತು, ಗಾಂಭೀರ್ಯ, ಮತ್ತು ಅವನ ಆತ್ಮ ವಿಶ್ವಾಸ, ಎಲ್ಲದರ ಬಗ್ಗೆ ಗೌರವ ಉಂಟು ಮಾಡಿತು.

"ಸುಯೋಧನನ ಆತ್ಮ ಕಥನ" - ಬರೆದಿರುವ ಈ ಕಾದಂಬರಿ, ಸುಯೋಧನನ ಬಾಲ್ಯ ಜೀವನದಿಂದ ಶುರುವಾಗುವ ಕಾದಂಬರಿ ಸುಯೋಧನನ ಸಂಪೂರ್ಣ ಜೀವನ ಚರಿತ್ರೆಯನ್ನೇ ತಿಳಿಸಿಕೊಟ್ಟಿದೆ.

ಸಂತೋಷ್ ಕುಮಾರ ಮೆಹೆಂದಳೆ 

ದ್ರೋಣಚಾರ್ಯರ ಗರಡಿಯಲ್ಲಿ ವಿದ್ಯಾಬ್ಯಾಸ ಮುಗಿಸಿ, ಸುಯೋಧನ ಒಬ್ಬ ದಕ್ಷ ಆಡಳಿತಗಾರನ ಗುಣಾವಳಿಗಳನ್ನ ಹೊಂದಿ ಸಿಂಹಾಸನಕ್ಕಾಗಿ ನಡೆಯುವ ಹೋರಾಟದ ಹಿಂದಿನ ರಹಸ್ಯಗಳೆಲ್ಲವನ್ನ ಲೇಖಕರು ಕಾದಂಬರಿಯೊಳಗೆ ಬಹಳ ಅಚ್ಚುಕಟ್ಟಾಗಿ ತಿಳಿಸಿಕೊಟ್ಡಿದ್ದಾರೆ.

ಕೃಷ್ಣ, ಬೀಷ್ಮ, ಯುದಿಷ್ಠಿರ ಇವರುಗಳ ನೀತಿ ಅನೀತಿಗಳೆಲ್ಲವನ್ನ ಬಯಲಿಗೆಳೆಯುತ್ತ ನಾನೊಬ್ಬ ದಕ್ಷನೆಂದು ಸುಯೋಧನ ತೋರಿಸಿದ್ದಾನೆ .
ನೇರ, ನಿಷ್ಠುರವಾದಿ ,ಹಾಗೂ ಛಲಗಾರನಾಗಿ, ಕೊನೆ ಉಸಿರು ಇರುವವರೆಗೂ ಪಾಂಡವರೊಂದಿಗೆ ಹೋರಾಡುವ ಸುಯೋಧನನ ವ್ಯಕ್ತಿತ್ವವನ್ನ ಇಲ್ಲಿ ಮೆಚ್ಚಲೆ ಬೇಕು. ಕಾದಂಬರಿಯೊಳಗೆ ಕರ್ಣ ಮತ್ತು ಸುಯೋಧನನ ಬಗ್ಗೆ ಇರುವ ಸ್ನೇಹಪರತೆ ತುಂಬಾ ಆಗಾಧವಾದುದ್ದು

ಮಾವ ಶಕುನಿಯ ಕುಯುಕ್ತಿ, ಸೇಡಿನಿಂದಾಗಿ ಕುರು ವಂಶವನ್ನೇ ನಾಶವಾಗಿರುವ ಕಥನ, ಕೊನೆಯಲ್ಲಿ ಸುಯೋಧನನಿಗೆ ಅರಿವಾದಾಗ,  ಮಹಾರಾಥಿಗಳದ ಭೀಷ್ಮ, ದ್ರೋಣ, ಕರ್ಣ, ಶಲ್ಯ ಇವರುಗಳ ಸಾವಿಗೆ ಕಾರಣ  ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧ ಎಂದು ಮರುಕೆ ಪಡುತ್ತಾನೆ.

ವಾಸುದೇವನಿಂದ (ಕ್ರಷ್ಣ) ಹಿಡಿದು ಧರ್ಮಜ, ಭೀಮ , ಅರ್ಜುನ ಪಾಂಡವರೆಲ್ಲ ಮೋಸದ ಯುದ್ಧವನ್ನು ಮಾಡಿ ಕರು ವಂಶವನ್ನು ನಾಶ ಮಾಡಿರುತ್ತಾರೆ ಎಂದು ಭಾವಿಸುತ್ತಾನೆ.

ಬೆನ್ನುಡಿ 

ತಾನು ಕೊನೆ ಉಸಿರು ಎಲೆಯುವಾಗಲೂ ತನ್ನ ಛಲವನ್ನು ಬಿಡದೇ ಅಶ್ವತ್ಥಾಮನನ್ನು ಸೇನಾದಿಪತಿಯಾಗಿ ಯುದ್ಧವನ್ನು ಮುಂದುವರಿಸಲು ತಿಳಿಸುವುದು, ಪಾಂಡವರ ನಾಶವನ್ನು ಬಯಸುವುದು ದುಖಕರವಾಗಿದೆ.

ಪ್ರಕಾಶಕರು : ಸ್ನೇಹ ಬುಕ್ ಹೌಸ್ 

ಪ್ರಥಮ ಮುದ್ರಣ: ಮಾರ್ಚ್ 2020

ಬೆಲೆ:  ರೂ. 380 

Posted 11/10/2023 


No comments:

Post a Comment