ಮಂಗಳವಾರ, 17/10/2023
ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಗೆ ಅರ್ಪಿತವಾದ ದಿನ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಈಕೆ. ಈಕೆಯನ್ನು ಹಲವಾರು ಮಂತ್ರ, ಸ್ತೋತ್ರ, ಪ್ರಾರ್ಥನೆಗಳಿಂದ ಒಲಿಸಿಕೊಳ್ಳಬಹುದು. ಮೂರನೇ ದಿನದ ಪೂಜಾ ವಿಧಾನ, ತಾಯಿಯನ್ನು ಒಲಿಸಿಕೊಳ್ಳುವ ಮಂತ್ರಗಳ ಕುರಿತು ಹೆಚ್ಚಿನ ಮಾಹಿತಿ...
ಚಂದ್ರ ಘಂಟಾ ದೇವಿಯ ರೂಪ:
ದೇವಿ ಚಂದ್ರಘಂಟೆಯು ಚಿನ್ನದ ಮೈಬಣ್ಣ, ಹತ್ತು ತೋಳು ಹಾಗೂ ಮೂರು ಕಣ್ಣನ್ನು ಹೊಂದಿರುತ್ತಾಳೆ. ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಯನ್ನು ಚಂದ್ರಘಂಟೆಯೆಂಬ ಹೆಸರು ಬಂದಿದೆ. ಈ ತಾಯಿಯನ್ನು ಚಂದ್ರಿಕಾ, ರಣಚಂಡಿಯೆಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಎದುರಾಗದು ಎಂಬ ನಂಬಿಕೆ ಭಕ್ತರದ್ದು.
ಚಂದ್ರಘಂಟೆಯ ಮಂತ್ರ:
ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
ಚಂದ್ರಘಂಟೆಯ ಪ್ರಾರ್ಥನೆ:
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
ಚಂದ್ರಘಂಟೆಯ ಧ್ಯಾನ:
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ
ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ
ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ
ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ
ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ
ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ
ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ
Posted 17/10/2023
No comments:
Post a Comment