ಬುಧವಾರ, ಅಕ್ಟೋಬರ್ 25, 2023
ಮೊದಲ ತಾವು, ಹಳವಳ್ಳಿ ಗ್ರಾಮ, ಉಡುಪಿ ತಾಲೂಕ್, ಉಡುಪಿ ಜಿಲ್ಲೆ.
92 ವರ್ಷದ ರತ್ನಾವತಿ ಹೆಗ್ಡೆ ಯೊಂದಿಗೆ... |
ಬ್ರಿಟಿಷರ ಕಾಲದಲ್ಲಿ ಊರಿನ ಪಟೇಲರ ಗತ್ತನ್ನು ತೋರಿಸುವ ಮನೆ.
ಬ್ರಹ್ಮಾವರ ದಿಂದ ಹೆಬ್ರಿಗೆ ಹೋಗುವ ದಾರಿಯಲ್ಲಿ ಪೇತ್ರಿ ಮತ್ತು ಕರ್ಜದ ನಡುವಿನ ಜಾಗದ ಒಳಗೆ ಸುಮಾರು ಎರಡು ಕಿ.ಮೀ. ದೂರದಲ್ಲಿದೆ ಒಂದು ಭವ್ಯವಾದ ಬಂಗಲೆ.
ಸುಮಾರು 400 ವರ್ಷಗಳ ಹಿಂದೆ ನಿರ್ಮಾಣವಾದ ಬಂಗಲೆ. ಶ್ರೀ ಚಿತ್ತರಂಜನ ಹೆಗ್ಡೆ ಅವರ ತಾಯಿಯ ಅಜ್ಜ ಶ್ರೀ ಜಗನಾಥ ಶೆಟ್ಟಿಯವರು ಕೊನೆಯ ಪಟೀಲರಾಗಿದ್ದರು. ಬರೇ ಕಾಡಿನ ವಾತಾವರಣ ವಿರುವದರಿಂದ ಪಟೇಲರ ಮನೆಯೇ ಊರಿನ ಎಲ್ಲಾ ವಿಚಾರಗಳು, ಜನನ-ಮರಣ, ಆಸ್ತಿ ನೋಂದಣಿ, ಕಂದಾಯ ವಸೂಲಿ, ವಿವಾದ ಬಗೆ ಹರಿಸುವಿಕೆ , ಇತ್ಯಾದಿ ಹತ್ತು ಹಲವಾರು ವಿಷಯಗಳ ಚರ್ಚೆ, ಹಾಗೂ ತೀರ್ಪು ಪಟೇಲರ ವ್ಯಾಪ್ತಿಯಲ್ಲಿ ಇತ್ತು.
ಮನೆಯ ಎದುರು ವಿಶಾಲವಾದ ಪ್ರಾಂಗಣ, ಜಗಲಿ, ಚಾವಡಿ, ಒಳ ಭಾಗದಲ್ಲಿ ವಿಶಾಲವಾದ ಹಾಲ್, ಅದರ ಹಿಂದೆ ದೇವರ ಕೊನೆ, ಅಡಿಗೆ ಮನೆ, ಮಹಡಿಯಲ್ಲಿ ಮಲಗುವ ಕೋಣೆ, ಬ್ರಿಟಿಷ್ ಅಧಿಕಾರಿಗಳು ಬಂದಾಗ ಅವರಿಗೆ ಉಳಕೊಳ್ಳಲು ವಿಶಾಲವಾದ ಆವರಣ, ಬೆಡ್ ರೂಮ್ , ಇತ್ಯಾದಿ ಇತ್ಯಾದಿ.
ಈಗ ಈ ಮನೆಯಲ್ಲಿ ಚಿತ್ತರಂಜನ್ ಹೆಗ್ಡೆಯವರ, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ 92 ವರ್ಷದ ತಾಯಿ ರತ್ನಾವತಿ ಹೆಗ್ಡೆ, ಮಗಳು ಜ್ಯೋತಿ ಶೆಟ್ಟಿ ಮತ್ತು ಕೆಲಸದವರು.
ಚಿತ್ತರಂಜನ್ ಹೆಗ್ಡೆ ಮತ್ತು ಮಡದಿ ಶಾಲಿನಿ ಯೊಂದಿಗೆ... |
ವರ್ಷಕ್ಕೆ ನವರಾತ್ರಿ ಉತ್ಸವ, ಕೋಲ, ಈ ಮನೆಯಿಂದ ಭಂಡಾರ, ಗೆಂಡ ಸೇವೆ ಇತ್ಯಾದಿಗಳ ಕಾರ್ಯಕ್ರಮ ನಡೆಯುತ್ತದೆ.
ನೂರಾರು ಎಕರೆ ಆಸ್ತಿಯನ್ನು ಹೊಂದಿರುವ ಈ ಮನೆತನ ಹಾಗು ಮನೆ, ಈಗ ಗತಕಾಲದ ವೈಭವವನ್ನು ತೋರುವ ಬಂಗಲೆಯಾಗಿದೆ.
ಸುಮಾರು ಒಂದು ಗಂಟೆಯ ಕಾಲ ಅಲ್ಲಿದ್ದು ವಾಪಸಾದೆವು.
ಬರೆದಿರುವುದು 27/10/2023
No comments:
Post a Comment