ಮಂಗಳವಾರ, ಸಪ್ಟಂಬರ 26 , 2023
ವಿಂಶತಿ ಉತ್ಸವ - 7 {ದುಬೈ ಬ್ರಾಹ್ಮಣ ಸಮಾಜ.)
ಶ್ರೀ ರಘುಪತಿ ಭಟ್ ಅವರಿಗೆ ಸನ್ಮಾನ
ಕರ್ನಾಟಕ ಕರಾವಳಿಯ ಜನಪ್ರಿಯ, ಧೀಮಂತ ಜನನಾಯಕ ಹಾಗೂ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಅವರನ್ನು ದುಬೈ ಬ್ರಾಹ್ಮಣ ಸಮಾಜ. ಯು.ಎ.ಇ., ಕನ್ನಡದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಅತಿಥಿಗಳು ಜ್ಯೋತಿ ಪ್ರಜ್ವಲಿಸುವ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ, ಸುಧಾಕರ್ ರಾವ್ ಪೇಜಾವರ್ ಅವರು ಎಲ್ಲರನ್ನು ಸ್ವಾಗತಿಸಿ, 20 ನೇ ವರ್ಷ ಪೂರೈಸುತ್ತಿರುವ ದುಬೈ ಬ್ರಾಹ್ಮಣ ಸಮಾಜದ ಸಾಧನೆ, ಜವಾಬ್ದಾರಿ, ಉದ್ದೇಶ ಹಾಗೂ ಯೋಜನೆಗಳನ್ನು ಪ್ರಸ್ತಾವಿಸಿ ರಘುಪತಿ ಭಟ್ ಅವರನ್ನು ಸನ್ಮಾನಿಸಿದರು.
ಭೀಮಾ ಜ್ಯುವೆಲ್ಲರ್ಸ್ ನ ಯು. ನಾಗರಾಜ್ ಅವರು ಭಟ್ ರನ್ನು ಅಭಿನಂದಿಸಿ ಶುಭ ಹಾರೈಸಿದರು.
ಶ್ರೀ ಕ್ರಷ್ಣ ಪ್ರಸಾದ್ ಅವರಿಂದ ವಂದನಾರ್ಪಣೆ ಯೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮವನ್ನು ಶ್ರೀಮತಿ ಆರತಿ ಅಡಿಗ ಅಚ್ಚುಕಟ್ಟಾಗಿ ನಿರೂಪಿಸಿದರು.
Posted 2/10/2023




No comments:
Post a Comment