Sunday, October 1, 2023

ಡಾ ಎಸ್.ಎಲ್.ಭ್ಯರಪ್ಪ ಅವರೊಡನೆ ಸಂವಾದ

 ಭಾನುವಾರ, ಅಕ್ಟೋಬರ್ 1, 2023 

ಚೌಡಯ್ಯ ಮೆಮೋರಿಯಲ್ ಹಾಲ್ , ಬೆಂಗಳೂರು.

ಡಾ.ಎಸ್.ಎಲ್.ಬೈರಪ್ಪ 


ಸಹನಾ ವಿಜಯಕುಮಾರ್, 

ನಮಸ್ಕಾರ. ಭೈರಪ್ಪನವರ 'ಪರ್ವ' ಕಾದಂಬರಿಯ ರಂಗರೂಪವನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿ ಗಮನಸೆಳೆದಿದ್ದ ಶ್ರೀ ಪ್ರಕಾಶ್ ಬೆಳವಾಡಿಯವರು ಇದೀಗ ನಾಟಕದ ಆಂಗ್ಲ ಅವತರಣಿಕೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಅವರ ಸಿದ್ಧತೆ, ಆಂಗ್ಲ ರೂಪಾಂತರದ ಹಿಂದಿನ ಸ್ಫೂರ್ತಿ, ಪರ್ವವನ್ನು ಅನ್ಯಭಾಷಿಗರಿಗೆ ನಾಟಕ ಮುಖೇನ ಪರಿಚಯಿಸುವ ತುಡಿತ, ಇತ್ಯಾದಿಗಳನ್ನು ಚರ್ಚಿಸಲು ಇದೇ ಭಾನುವಾರ (ಅಕ್ಟೋಬರ್ ೧) ಚೌಡಯ್ಯ ಸ್ಮಾರಕ ಭವನದಲ್ಲಿ ಸೇರುತ್ತಿದ್ದೇವೆ. ನೀವೂ ಜೊತೆಯಾಗಿ. ನಾಟಕದ ಮೊದಲ ಪ್ರದರ್ಶನ ಅಕ್ಟೋಬರ್ ೧೯ರಂದು. ಚೌಡಯ್ಯ ಸ್ಮಾರಕ ಭವನದಲ್ಲೇ.

ಪ್ರಕಾಶ್ ಬೆಲ್ವಾಡಿ 


ಸಹನಾ ವಿಜಯಕುಮಾರ್ 


ಸಹನಾ ವಿಜಯಕುಮಾರ್ ಅವರು ಪರ್ವ ದಲ್ಲಿಯ ಧರ್ಮ ಜಿಜ್ಞಾಸೆ, ಕರ್ಣ ಕುಂತಿಯ ಸಂಭಂದ, ಹಾಗೂ ಇನ್ನೂ ಅನೇಕ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು. 
"ಪರ್ವ" ಕಾದಂಬರಿಯು ಡಾ ಎಸ್.ಎಲ್.ಬೈರಪ್ಪನವರ ಶ್ರೇಷ್ಠ ಕ್ರತಿಯೆಂದೂ ಬಣ್ಣಿಸಿದರು.
ಪ್ರಕಾಶ ಬೆಲ್ವಾಡಿಯವರು ತಾವಿ ನಿರ್ದೇಶಿಸಿದ ಪರ್ವ ಇಂಗ್ಲಿಷಿನ ರಂಗ ಪ್ರಯೋಗದ ಬಗ್ಗೆ. ಕನ್ನಡದಿಂದ ಇಂಗ್ಲಿಷಿಗೆ ತರ್ಜುಮೆ ಮಾಡುವಾಗ ಸಮಸ್ಯೆಗಳು, ಅಭಿನಯ, ನಟನೆಯಲ್ಲಿ ಆಗುವ ಜಿಜ್ಞಾಸೆ ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಮಾತನಾಡಿದರು.

ಎಸ್.ಎಲ್.ಬೈರಪ್ಪನವರ ತಮ್ಮ ಪ್ರತಿಕ್ರಿಯೆಯಲ್ಲಿ ಎಂಟು ಗಂಟೆಗಳ ಕಾಲದ ಪರ್ವ ನಾಟಕ, ಬೆಂಗಳೂರಿನಲ್ಲಿ 3500 ರೂಪಾಯಿಯ ಟಿಕೇಟಿನಲ್ಲಿ ನಡೆಯುತ್ತಿರುವುದು ಇಲ್ಲಿಯ ಜನರ ಹತ್ತಿರ ದುಡ್ಡು ಇರುವುದರಿಂದ ನಡೆಯುತ್ತದೆ ಎಂದು ವ್ಯಂಗ್ಯ ಆಡಿದರು.


ಎಸ್. ಎಲ್ ಬೈರಪ್ಪ (Born: 20 ಅಗಸ್ಟ್ 1931 ), ಈಗ 92 ವಯಸ್ಸಿನಲ್ಲಿ ತಮ್ಮ ಕ್ರತಿಗಳ ಬಗ್ಗೆ, ಅವರ ಅನುಭವಗಳು, ನಾಲ್ಕು ವರ್ಷದ ವರೆಗೆ ತಾಯಿಯ ಹಾಲುನ್ನು ಉಣ್ಣುತ್ತಿರುವುದು, ಗುಜರಾತಿನಲ್ಲಿಯ ಅನುಭವ ಇತ್ಯಾದಿಗಳ ಬಗ್ಗೆ ಮಾತನಾಡಿದರು.




ಬರೆದಿರುವುದು (1/10/2023) 



No comments:

Post a Comment