ಬುಧವಾರ, 17 ಅಕ್ಟೋಬರ 2023
ನವರಾತ್ರಿಯ ನಾಲ್ಕನೆಯ ದಿನ :-
"ಕುಷ್ಮಾಂಡ ದೇವಿಯ ಹಿನ್ನಲೆ, ವಿಶೇಷ, ಕಥೆ ಮತ್ತು ಮಹತ್ವ :-"
"ಕುತ್ಸಿತಃ ಉಷ್ಮಾಃ ಕೂಷ್ಮಾಃ|"
"ಕುತ್ಸಿತಃ" ಅಂದರೆ "ಸಹಿಸಲು ಕಠಿಣವೆನಿಸಿದ್ದು". "ಉಷ್ಮಾ" ಎಂದರೆ "ಸೂಕ್ಷ ಲಹರಿಗಳ ಧ್ವನಿ".
"ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|". ಇಲ್ಲಿ ಈ ಶ್ಲೋಕದ ಅರ್ಥವು ಹೀಗಿದೆ.
ತ್ರಿವಿಧದ ತಾಪಗಳೆಂದರೆ, ಉತ್ಪತ್ತಿ [ ಜನ್ಮ ], ಸ್ಥಿತಿ [ ಬೆಳವಣಿಗೆ ] ಮತ್ತು ಲಯ [ ಮೃತ್ಯು ]. ಇಲ್ಲಿ "ಮೃತ್ಯು" ಎಂದರೆ "ಮೋಕ್ಷದ ಸಂಕೇತ". ಅಂದರೆ, ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶಹೊಂದುವುದು.
"ಸಂಸಾರ"ವೆಂದರೆ, "ಪುನಃಪುನಃ". ಮತ್ತು "ಅಂಡ" ಎಂದರೆ, "ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ". "ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನಾರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ.
ಈ ಪ್ರಕ್ರಿಯೆಗಳಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಅವಶ್ಯಕತೆಯಿದೆಯೋ ಅವಳನ್ನೇ ಕೂಷ್ಮಾಂಡ ಎಂದು ಕರೆಯಲಾಗುತ್ತದೆ.
ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು. ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ.
ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ.
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.
ಕೂಷ್ಮಾಂಡ ದೇವಿಯ ವಿಶೇಷ :-"
ಕೂಷ್ಮಾಂಡ ದೇವಿಯು ಸಿಂಹರೂಪಿಣಿಯಾಗಿದ್ದು ಇವಳಿಗೆ ಎಂಟು ಹಸ್ತಗಳಿದ್ದು ಅದರಲ್ಲಿ ತನ್ನ ಸಪ್ತ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಚಕ್ರ, ಗಧೆ ಮತ್ತು ಅಮೃತ ಕಳಶ ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿರುವಳು.
ಇವಳ ತಲೆಯ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದ್ದು, ಇವಳ ತಾಯಿಯ ರೂಪವನ್ನು ತೇಜಪುಂಜವೆಂದು ವರ್ಣಿಸಲಾಗುತ್ತದೆ.
ಇವಳಿಗೆ ಅಷ್ಟ ಭುಜಗಳಿರುವುದರಿಂದ "ಅಷ್ಟಭುಜಾದೇವಿ" ಎಂದು ಬಣ್ಣಿಸಲಾಗುತ್ತದೆ. ಇವಳ ಮತ್ತೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರಿಗೆ ರಕ್ಷಣೆ ನೀಡುವಳೆಂಬ ನಂಬಿಕೆ ಇದೆ.
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ರವಿ ಗ್ರಹದಿಂದುಂಟಾಗುವ ಎಲ್ಲಾ ಬಗೆಯ ಕೆಡುಕುಗಳನ್ನು ನಿವಾರಿಸಬಹುದೆಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ದೇವಿ ಕೂಷ್ಮಾಂಡ ದೇವಿಯ ಆರಾಧನೆಯಿಂದ ನಾವು ನಮ್ಮ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ಇವಳ ಆರಾಧನೆಯು ನಮ್ಮ ಮನಸ್ಸಿನೊಳಗಿನ ದುಃಖ ಅಥವಾ ನೋವುಗಳನ್ನು ಕಡಿಮೆ ಮಾಡಿ ಸಂತಸವನ್ನು ನಮ್ಮ ಜೀವನದಲ್ಲಿ ತುಂಬುವಂತೆ ಮಾಡುವಳು.
No comments:
Post a Comment