ಸೋಮವಾರ, 16 ನೇ ಅಕ್ಟೋಬರ್ 2023
ಶ್ರೀ ಶಾರದಾಂಬ ದೇವಸ್ಥಾನ, ಜಾಲಹಳ್ಳಿ ಬೆಂಗಳೂರು.
ಶರನ್ನವರಾತ್ರ ಮಹೋತ್ಸವ - 2023, ಎರಡನೇ ದಿನವಾದ ಇಂದು ನಾವು ಜಾಲಹಳ್ಳಿ ಯಲ್ಲಿರುವ ಶ್ರೀ ಶಂಕರ ಸೇವಾ ಸಮಿತಿಯಿಂದ ನಡೆಸುವ ಶಾರದಾಂಬ ನಗರದ ಶ್ರೀ ಶಾರದಾ ಕ್ಷೇತ್ರ ದಲ್ಲಿ ಚಂಡಿಕಾ ಯಾಗ, ಪೂಜೆ ಮಂಗಳಾರತಿಗೆ ಸಾಕ್ಷಿಯಾಗಿ ಧನ್ಯರಾದೆವು.
ಭಕ್ತರಿಂದ ಸೇವೆಯ ಚಂಡಿಕಾ ಯಾಗ, ವಿಶೇಷ ನವರಾತ್ರಿಯ ಪೂಜೆ, ಮಹಾ ಮಂಗಳಾರತಿ ಎಲ್ಲವೂ ಮನಸ್ಸಿಗೆ ಶಾಂತಿಯನ್ನು ಕೊಡುವುದಾಗಿದೆ.
ಮಡದಿ ನಳಿನಿಯಿಂದ ವೀಡಿಯೋ ಮಾಡಿ ಸಂಯೋಜಿಸಿದ ವೀಡಿಯೋ:
ಭರ್ಜರಿಯದ ವಿಶೇಷ ಊಟವನ್ನು ಮಾಡಿ, (ಕೋಸಂಬರಿ 2, ಪಲ್ಯ -2, ವಾಂಗಿಬಾತ್, ಅನ್ನ, ಸಾರು, ಹುಲಿ, ಮೈಸೂರು ಪಾಕ್, ಪಾಯಸ, ಮೊಸರು ) ಮನೆಗೆ ವಾಪಾಸಾದೆವು.
ಮೇಲಿನ ಶ್ರೀ ಶಾರದಾಂಬ ಕ್ಷೇತ್ರ ವು ಸುಮಾರು 8 ಕಿ.ಮಿ ದೂರದಲ್ಲಿದ್ದು ಕಾರಿನಲ್ಲಿ 20 ನಿಮಿಷಗಳು .
posted 17/10/2023




No comments:
Post a Comment